Sunday, May 13, 2007

ವಿದೇಶಿ ಜೀವನ್.

ನನಗೆ ಅನಿಸುತ್ತೆ ದೊಡ್ಡವರು ಹೇಳಿರುವ ಗಾದೆಗಳು ಒಂದು ಸುಳ್ಳು ಅಲ್ಲ ಅಂತ್. ದೊರದ ಬೆಟ್ಟ ನುಣ್ಣಗೆ ಅಂತ್ ಗಾದೆ ಕೇಳಿರಬಹುದು ಅದು ನೂರಕ್ಕೆ ನೂರರಷ್ಟು ಸತ್ಯ ಅಂತ್ ಅನಿಸಿದ್ದು ನಾನು ವಿದೇಶಕ್ಕೆ ಬಂದ ಮೇಲೆ . ನನಗೆ ಆ ದಿನ ಇನ್ನೂ ನೆನಪಿನಲ್ಲಿದೆ , ನಾನು ವಿದೇಶಕ್ಕೆ ಹೋಗುವ ಉತ್ಸಾಹ ಮತ್ತು ಸಂಬ್ರಂ .ಮನೆಯಲ್ಲಿ ಎಲ್ಲರ ಕಣ್ಣಲ್ಲಿ ಆನಂದ,ದುಖ ಎರಡು ನೋಡವಹಂತ ಸಂದರ್ಭ.
ನಾನು ಬರುವಾಗ ಇದ್ದ ಸಂತೋಶ್ , ವಿದೇಶಕ್ಕೆ ಬಂದ ಮೇಲೆ ಬಹಳ ಧಿನ ಉಳಿಯಲಿಲ್ಲ. ಇಲ್ಲಿಯ ಜೀವನವೇ ಹಾಗೆ ಬಹಳ ಮೆಕ್ಯಾನಿಕಲ್ ಲೈಫ್ ಕಣ್ರೀ. ಏಮೋಷೋನನೆ ಇಲ್ಲದೇ ಇರುವವ್ ಜನ ಅನಿಸುತ್ತೆ . ಜೀವ ಇಲ್ಲದ ಮನೆ ,ನಾಲ್ಕು ಚೆಕ್ರದ ವಾಹನ್ ಮತ್ತು ಹಾಗೆ ಅಫ್ಫಿಸೇನಲ್ಲಿ ಹೋದರೆ ಅದೇ ಫಿರಂಗಿ ಜನ. ನನಗೆ ವಿಚಿತ್ರ ಅನಿಸಿದ್ದು ಏನು ಅಂದ್ರೆ ನಾನು ಬೆಂಗಳೂರಲ್ಲಿ ಇದ್ದಾಗ ಅಫ್ಫಿಸನಲ್ಲಿ ರಾತ್ರಿ 8:00 ಗಂಟೆ ಯಾವಾಗ್ ಬಡಿಯತ್ತೆ ಗೊತ್ತೇ ಆಗ್ತಾ ಇರ್ಲಿಲ್ಲ. ಆದ್ರೆ ಇಲ್ಲಿನ ಆಫೀಸೆನಲ್ಲಿ ನಾಲ್ಕು ಬಾರಿಸಿತು ಅಂದ್ರೆ ಎಲ್ಲ ಫ್ರೆಂಡ್ಸ್ ಗೆ ಒಂದು ಈ-ಮೇಲ್ ಹಾಕ್ತೀನಿ ಯಾವಾಗ ಮನೆಗೆ ಹೊರಾಡೋದು? ಅಂತ್. ಹಾಗೆ ಅಂತ್ ಕೆಲ್ಸ್ ಕಡಿಮೆ ಅಂತ್ ಅಲ್ಲ,ಆಫೀಸೆನಲ್ಲಿ ಕೆಲ್ಸ್ ಮಾಡೋಕ್ಕೆ ಮನಸ್ಸು ಬರೋಲ್ಲ ಹೀಗಾಗಿ ನಾನು ಮನೆಗೆ ಬಂದು ನನ್ನ ವರ್ಕ್ continue ಮಾಡ್ತೀನಿ. ಹಾಗೆ ನೋಡಿದ್ರೆ ಇಲ್ಲಿನ ಫಿರಂಗಿ ಜನ ಬಹಳ ಒಳ್ಳೆಯ ಜನ ಅಸ್ಟೆ ಸ್ವಲ್ಪ ಏಮೋಷನ್ಸ್ ಕಡಿಮೆ , ಇಲ್ಲ ಅಂದ್ರೆ ಯಾರಿಗೂ ಕೀಲಮಟ್ತಿನಲ್ಲಿ ನೋಡುವ ಗುಣ ಇವರದಲ್ಲ.

ಇವಾಗ ಅನಿಸುತ್ತಿದೆ ನಾನು ಬೆಂಗಳೋರ್ ಯಾವಾಗ್ ಮರಳುತ್ತೇನೆ ಅಂತ್, ಯಾಕೆಂದ್ರ ಅದೇ ಫ್ರೋಜನ್ ಪರತಾ ,ಫ್ರೋಜನ್ vegetables ಉಟ ಮಾಡಿ ಸಾಕಾಗಿ ಹೋಗಿದೆ ಯಾವಾಗ ಮನೆಯಲ್ಲಿ ಹೋಗಿ ಮಂಡಕ್ಕಿ,ಮೊಸರನ್ನ ಚಟ್ನಿ ಮತ್ತು ಪುಂಡಿಪಲ್ಲೆ-ಚಪಾತಿ ತಿನ್ನುತ್ತೇನೆ ಅಂತ ಅನಿಸುತ್ತಾ ಇದೆ. ಇಲ್ಲಿರುವಾಗ ನಮ್ಮೋರಲ್ಲಿ ಕಳೆದ ಒಂದು ಒಂದು ಕ್ಷಣ ಕೂಡ ನೆನಪಿಗೆ ಬರುತ್ತೆ . ಮುಂಜಾನೆ ಜಾವಾ ಆಗುತ್ತಲೇ ಆ ಭಟ್ಟನ್ ಹೊಟೇಲಲ್ಲಿ ಇಡ್ಲಿ ಸಾಂಬರ್ ಮತ್ತು ಮಧ್ಯಾನ ಹೊತ್ತಿಗೆ ಆ ಜಲಭ್ವನದಲ್ಲಿ ಆ ಕಾಲ್ಲ್ ಸೆಂಟ್ರೆ ಹುಡುಗಿಯರಿಗೆ ಲೈನ್ ಹೊಡೆಯುತ್ತಾ ತಿನ್ನುವ ಚಿತ್ರಾನ್ನ, ರಾತ್ರಿ ಮನೆಯಲ್ಲಿ ಬರುತ್ತಲ್ಲೇ ಬಿಸಿ ಬಿಸಿ ಅನ್ನ್ ಸಾಂಬರ್ , ಚಪಾತಿ ಮತ್ತು ಪುಂಡಿ ಪಲ್ಲೆ. ಸ್ವರ್ಗಕ್ಕೆ ಇನ್ನೇನು ಮೂರೇ ಗೇಣು ಆದ್ರೆ ನಮ್ಮ ಸೊಕ್ಕು ಅಂತ್ ಅಂತಾರಲ್ಲ್ ಅದು ಎಲ್ಲಿ ಹೋಗುತ್ತೆ, ಅದಕ್ಕೆ ಈ ವಿದೇಶಿ ಜೀವಾನ್ ಬೇಕಿತ್ಚು ಮತ್ತು ಅದಕ್ಕೆ ತಕ್ಕ ಶಾಸ್ತಿ ಬೇಕಿತ್ತು .

ಇಲ್ಲಿನ ಜೀವಾನ್ ಫೂಲ್ ರೇಡಿಮೆಡ್ , ಬಟ್ಟೆ ಓಗೆಯಲ್ಲಕೆ ವಾಷಿಂಗ್ ಮಶೀನ , ಭಾಂಡಿ ವಾಷ್ ಮಾಡೋಕ್ಕೆ ಎಲೆಕ್ಟೊರೀಕ್ ವೇಸ್ಸೆಲ್ಸ್ ಕ್ಲೀನೇರ್ ಮತ್ತು ಉಟ ಮಾಡೋಕ್ಕೆ ಎಲ್ಲ ಫ್ರೋಜನ್ ತಿಂಡಿ, ಓಡಾಡಕ್ಕೆ ವಾಹನ್ ,ಕುಡಿಯೊಕ್ಕೆ ಬೀರ್ ಮತ್ತು ಕೈ ತುಂಬಾ ಸಂಬಳ. ಈಸ್ಟ್ ಎಲ್ಲಾ ಸುಖದ ಜೀವನ ಇದ್ದರು ಮನಸ್ಸಿಗೆ ನೆಮ್ಮ್ ಧೀನೇ ಇಲ್ಲ. ಈವಾಗ ಗೊತ್ತಾಗಿದೆ ದುಡ್ಡು ಇದ್ರು ನೆಮ್ಮದಿ ಇಲ್ಲಾಧ ಜೀವ್ನ್ ಅಂದ್ರೆ ಹೇಗಿರುತ್ತೆ ಅಂತ್, ದಿನಾಲೂ ನನ್ನ ನಾನೇ ಪ್ರಸ್ನೆ ಕೇಳ್ತಾ ಇರ್ತೀನಿ ದುಡ್ಡು ಜೀವನ ಅಥವಾ ಆ ಚಿಕ್ಕ ಚಿಕ್ಕ ಸಂತೋಶ್ ಏನು ಸಿಗುತ್ತೆ ಅದು ಜೀವನ ಅಂತ್ ?. ನನ್ನ ಪ್ರಸ್ನೆಗೆ ಉತ್ತರ್ ಸಿಕ್ಕಿದೆ ಆದ್ದರಿಂದ ನಾನು ನಿರ್ಧಾರ್ ಮಾಡಿದ್ದೇನೆ ಇನ್ನೂ ನಾನು ನಮ್ಮ ದೇಶಕ್ಕೆ ಹಿಂದಿರಿಗ್‌ಬೇಕು ಅಂತ್. ನನ್ನ ಆತ್ಮೀಯ ಗೆಳೆಯರಿಗಿ ಹೇಳುವದೇನ ಅಂದ್ರೆ ನೀವು ವಿದೇಶಿಕ್ಕೆ ಬರ್ಬೇಕು ಅನಿಸಿತ್ತು ಅಂದ್ರೆ ನಿಮ್ಮ ಬೆಸ್ಟ್ ಕಂಪನಿಯಾಂಶಿಪ್ ಆದ ನಿಮ್ಮ ಕುಟುಂಬದ ಜೊತೆಗೆ ಬನ್ನಿ. ಆವಾಗ ನೀವು ಎ ವಿದೇಶಿ ಜೀವನ ಇದ್ಧೋಸ್ಟ್ ದಿನ ಸಂತೋಷದಿಂದ ಕಳೆಯಬಹುದು.

1 comment:

raghu said...

Super.. Keep it up sir