Monday, May 14, 2007

ಅಂದು ಸಂಜೆ.

ಸಂಜೆ ಅನ್ನುವ ಪದ ಎಸ್ಟೋ ಸುಂದರವಾಗಿದೆ ಅಸ್ಟೆ ಸೊಗಸಾಗಿ ಇದೆ ಅಲ್ವಾ ಅದರಾ ಪ್ರಕ್ರತಿ ಸೌಂದರ್ಯ. ಅಂದು ಭಾನುವರ್ ಸಂಜೆ ಇನ್ನೂ ನಾನು ಮಲಗಿದ್ದೆ . ನನ್ನ ಕಣ್ನಗಳು ಆರ್ಧ ತೆರೆದು ಎದರುಗಡೆ ಇದ್ದ ಲಾಪ್ಟೋಪಲ್ಲಿರೂವ ಗಡಿಯಾರ್ ನೋಡಿದೆ ಗಂಟೆ 5 ಮುಕ್ಕಾಲು. ಹೊರಗಡೆ ಹಕ್ಕಿಗಳ ಚಿಳಿಪಿಳಿ ಸದ್ದು , ಕೆಲಗಡೆ ಜನರು ಸಂಜೆ ವಾಕಿಂಗ್ ಮಾಡುತ್ತಾ ಮಾತಡುವ ಶಬ್ದ ಮತ್ತು ಇವೆಲ್ಲರ ಜೊತೆ ನನ್ನ ಕಿವಿಗಳನ್ನು ತಂಪು ಮಾಡ್ತ್ ಇತ್ತು ನನ್ನ ಲಾಪ್ಟೋಪಲ್ಲಿ ಓಡೋತಿರುವ "ಮೊದಲು ಪುಟಕು ಕೊನೆಯ ಪುಟಕ ಇರುವ ಅಂತರ " ಹಾಡು.

ಅಂದು ಸಂಜೆ ನನ್ನ ಮನಸು ಸ್ವಲ್ಪ ಹಗುರುವಾಗಿತ್ತು. ಅಂದ ಹಾಗೆ ಈ ಮನಸ್ಸಿನ ಚಂಚಲತೆಯ ಬಗ್ಗೆ ಬಹಳ ಜನ ಬಹಳಾಸ್ಟ್ ಬರದಿದ್ದಾರೆ. ಆದ್ದರಿಂದಲೇ ಕಾಣುತ್ತೆ ನಾನು ನನ್ನ ಜೀವನದಲ್ಲಿ ಮನಸ್ಸಿಗಿಂತ ವೀಲ್ಲ್-ಪವೆರ್ ಗೆ ಮಹತ್ವ ಕೊಟ್ಟಿದು. ಆದ್ರೆ ಅಂದು ಮುಂಜಾನೆ ನನ್ನ ಮನಸ್ಸು ಮೊಟ್ಟ ಮೊದಲ ಬಾರಿಗೆ ನನ್ನ ವೀಲ್ಲ್-ಪವೆರ್ ಮೇಲೆ ಜಯ ಸಾಧಿಸಿ ಕುಣಿತಾ ಇತ್ತು. ಯಾವಾದನ್ನು ಜೀವನದಲ್ಲಿ ಅವಳ ಹತ್ತಿರ ನನ್ನ ಸ್ವಾಭಿಮಾನ ಬಿಟ್ಟು ಹೇಳಬಾರದು ಅಂತ್ ಅನ್ಕೊಂಡ್ ಇದ್ದೇ ಅಂದು ಅದನ್ನು ಹೆಳ್ಬಿಟ್ಟಿದ್ದೆ. ಮನಸ್ಸೆನು ಹಗುರವಾಗಿತ್ತು ,ಆದ್ರೆ ಅಂದು ನನ್ನ ಸ್ವಾಭಿಮಾನಕ್ಕೆ ಬಹಳ ದೊಡ್ಡ ಪೆಟ್ಟು ಬಿದ್ದಿತ್ತು. ನನ್ನ ನಾನೇ ಪ್ರೆಸ್ನೆ ಕೇಳ್ತಾ ಇದ್ದೇ ಏಕೆ ನಾನು ಹೀಗೆ ಮಾಡಿದೆ ಅಂತ್?. ಅಸ್ಟ್ರಲ್ಲಿ ನನ್ನ ಗೆಳೆಯ ಬಂದು ಟೆನ್ನಿಸ್ ಆಡ್ತೀರಾ ಸರ್ ಅಂತ್ ಕೇಳಿದ್ದ . ಅದಕ್ಕೆ ಇಲ್ಲ ಅಂತ್ ಹೇಳಿ ಜಿಮ್ ಮಾಡೋಕ್ಕೆ ಅಂತ್ ರೆಡಿ ಆಗಿ ನಡೆದೇ, ಆದ್ರೆ ಅಂದು ಜಿಮ್‌ಗೆ ಹೋಗುವ ಮನಸೇ ಇಲ್ಲ.

ಹಾಗೆ ಸ್ವಲ್ಪ ದೂರ ನಡೆದು ಅಲ್ಲೇ ಇರುವ ಒಂದು ಪುಟ್ಟ ಕೊಳದ ಹತ್ತಿರ ಹೋಗಿ ಆ ನೀರು ಹಕ್ಕಿಗಳನ್ನೇ ನೋಡ್ತಾ ಕುಳಿತೆ. ಒಮ್ಮೆ ಸುತ್ತಲು ಕಣ್ಣು ಹಾಕಿ ನೋಡಿದೆ ಆ ತಂಪಾದ ಗಾಳಿ,ಸೂರು ಸೂರು ಅಂತ್ ಸದ್ದು ಮಾಡುತ್ತಾ ಹರಿಯುತ್ತಿರುವ ನೀರು,ಸುತ್ತಲು ಹಸಿರು ಗಿಡಗಳು ಮತ್ತು ನಾನು ಹಾಕುತ್ತಿರುವ ದಾಣಿಗಳನು ತಿನುತ್ತೀರಿವಾ ಆ ನಿರಾಹಕ್ಕಿಗಳು .ಈ ಸಂಜೆಯ ಸೌಂದರ್ಯ ನೋಡ್ತಾ ಇದ್ದರೇ ,ನಾನು ಹಸಿರು ಸೀರೆ ತೊಟ್ಟ ಸುಂದರ್ ಹುಡಿಗಿಯ ಗರ್ಭದಲ್ಲಿ ಬೆಳೆಯತ್ತಿರುವ ಕಂದನ ಹಾಗೆ ಕಾಣುತ್ತಾ ಇದ್ದೇ. ಜೀವನವೆಲ್ಲ ಹೀಗೆ ಈ ಸುಂದರ್ ಪ್ರಕುರ್ತಿಯ ಮಡಿಲಲ್ಲಿ ಕಳೆದು ಬಿಡ್ಲಾ ಅಂತ್ ಅನಿಸುತ್ತಾ ಇತ್ತು. ನನ್ನ ಕಣ್ನಗಳು ಹಾಗೆ ಆಕಾಶದ ಕಡೆ ಯಾವಾಗ ಹರಿದು ಹೋಗಿದ್ಡುವು ಗೊತ್ತೇ ಇರ್ಲಿಲ್ಲ್ಲ ,ನೋಡಿದರೆ ಮೋಡಗಳು ಭೂಮಿಯೇ ತಾಯಿಯ ಮಡಿಲಲ್ಲಿ ಯಾವಾಗ ಅಪ್ಪಳಿಸಲಿ ಅಂತ್ ಹಾತೊರೆ ತಿದ್ದ ಹಾಗೆ ಇತ್ತು. ಆವಾಗ ನನಗೆ ನೆನಪಿಗೆ ಬಂದಿದು ಸಿಗ್ರಟ್ ಎಸ್ಟೋ ದಿನವಾಗಿತ್ತಲ್ವೇ ನಾನು ಸಿಗ್ರಟ್ ಬಿಟ್ಟು, ಅಂದು ನನಗೆ ಸೇದುವ ಮನಸ್ಸಾಗ್ತಾ ಇತ್ತು. ಅದೇ ಸಮಯದಲ್ಲಿ ಮೋಡಗಳು ದೊಡ್ಡ ದೊಡ್ಡ ಹನಿ ಯಾಗಿ ಕೆಳಗೆ ಅಪ್ಪರಿಸಲು ಆರಂಭ ವಾಗಿದ್ದವು. ನಾನು ಮಳೆಯಲ್ಲಿ ನೆನೆದು ತಿಂಗಳುಗಳೇ ಕಳೆದು ಹೋಗಿದ್ಡುವು. ನಾನು ಬೆಂಗಳೂರಲ್ಲಿ ಮಳೆಗಳಾದಲ್ಲಿ ದಿನಲೂ ಅಫ್ಫಿಸಿನಿಂದ ಮನೆಗೆ ನೆನೆದು ಬರ್ತಾ ಇದ್ದಿದು ನೆನಪಿಗೆ ಬಂತು.ಮಳೆಯಲ್ಲಿ ನೆನೆಯೌವ ಸಿಗುವ ಥ್ರಿಲ್ಲ್ ಒಂಥರ ಡಿಫೇರೆಂಟ್ , ಹಾಗೆ ಮಳೆಯಲ್ಲಿ ಕುಳಿತು ಬಿಡ್ಲ್ಲಿ ಅಂತ್ ಅನಿಸುತ್ತಾ ಇತ್ತು ಆದರೆ ಏನಾದ್ರೂ ಆಗಿ ಹಾಸಿಗೆ ಮೇಲೆ ಬಿದ್ದರೆ ನನ್ನ ನೋಡ್‌ಕೂಳ್ಲಕೆ ಅಂತ್ ಅಮ್ಮ ಇಲ್ಲಿ ಇಲ್ಲಾ ಅಂತ್ ಗೊತ್ತಿತ್ತು.

ಹಾಗೆ ಸ್ವಲ್ಪ ನೆನೆದು ಮನೆಯಲ್ಲಿ ಹೋದಾಗ ಟಿ ರೆಡಿ ಆಗಿತ್ತು.ನನಗೆ ಇನ್ನೂ ನೆನೆಯೌವ ಆಸೆ ಅದಕ್ಕೆ ಟಿ ಕುಡಿಯತ್ಟ ಸಿಗ್ರಟ್ ಹಚ್ಚಿ ಮಳೆಯಲ್ಲೇ ಹೊರಗೆ ಬಂದೆ. ಆ 30 ನಿಮಿಷದಲ್ಲಿ ಮಳೆಯಲ್ಲಿ ಕೂಣಿದೆ, ನೆನೆದೇ, ಸಿಗ್ರೆಟ್ ಸೇಧಿ ಆನಂದ ಪಟ್ಟೀ ಆದರೆ ನನಗೆ ಗೊತ್ತೇ ಇಲ್ಲದ ಹಾಗೆ ಈ ಪ್ರಕೃತಿಯ ಸೌಂದರ್ಯದಲ್ಲಿ ನೆನೆಯುತ್ತಾ ನನ್ನ ವೀಲ್ಲ್-ಪವೆರ್ ಈ ಚಂಚಲ್ ಮನಸ್ಸಿನ ಮೇಲೆ ವಿಜಯದ ಧಾರೀಯಲ್ಲಿ ಸಾಗಿತ್ತು. ನನ್ನ ವೀಲ್ಲ್-ಪವರ್ ಮೇಲೆ ನನಗೆ ಮೊದಲಿನಿಗಿಂತಲೂ confidence ಜಾಸ್ತಿ ಆಗಿದೆ ಅಂತ್ ಅನಿಸುತ್ತಿತ್ತು ಆ ಸಂಜೆ .

2 comments:

CS said...

Awesome sir..I liked this very much....

ಸಾಮಾನ್ಯ ಭಾವನೆಗಳನ್ನು ಬಹಳ ಸುಂದರವಾಗಿ ಬರೆದಿದ್ದೀರಾ. ಅದರಲ್ಲೂ ಉಪಮೆಯಗಳ ಬಳಕೆ ನನಗೆ ತುಂಬನೆ ಹಿಡಿ ಸಿದ್ದು.

Keep writing....

If writing is your potential....reading is our passion!!!!

Bigbuj said...

Thank you sir. Nimma salahegalu nanna innu bariyalu huridumbisuttide.
Keep an eye..I am sure u will find more and more intresting articles in future