Monday, May 28, 2007

ಮೊದಲ ಪ್ರೇಮ

ಅಂದು ಕಾಲೇಜನಲ್ಲಿ ನನ್ನ ಗೆಳೆಯ ದೀಪಕ್ ಎರಡನೆ ಕ್ಲಾಸ್ಸ ಮುಗಿಯೋತ್ತಲೆ ನನ್ನ ಹತ್ತಿರ ಬಂದು ಕುಡಿಯೊಕ್ಕೆ ಹೋಗಣ್ ಅಂತ್ ಕೇಳಿದ್ದ.. ನನಗೆ ಎಲ್ಲಿಲಾದ ಆಶ್ಚಾರ್ಯ , ಎಂದು ಕುಡಿಯಲಾರದ ಈ ಅಸ್ಸಾಮಿ ಇವತ್ತು ಕುಡಿಯೋಣ ಅಂತ್ ಕೇಳ್ತಾ ಇದ್ದಾನಲ್ಲ ಅಂತ್ ಮನಸ್ಸಿನಲ್ಲೇ ಅನ್ಕೊಂಡು ಅವನಿಗೆ ಏನು ಪ್ರಸ್ನೆ ಕೇಳದೇ ನಡೆ ಅಂದೇ.

ಮಟ ಮಟ ಮಧ್ಯಾನ್ ದಂದು ಇಬ್ಬರು ಮೂನ್ ಲಿಯಟ್ ರೆಸ್ಟೋರಂಟಾಗೆ ಹೋಗಿ ಕುಳೆತು ಎರಡು ಬಿಯರ್ ಆರ್ಡೆರ್ ಮಾಡಿದೆವು..10 ನಿಮಿಶ್ ಇಬ್ಬರು ಮೌನ..ಕೊನೆಗೆ ಅವನೆ ಆ ಮೌನಕ್ಕೆ ಕೊನೇ ಹಾಕಿ ಈ ಹುಡಿಗಿಯರು ಎಸ್ಟ್ ಬೇಗನೆ ಮರೆತು ಬಿಡ್ತರಲ್ಲಾ, ಅವರಿಗೆ ಮನಸ್ಸಿನ ಭಾವನೆಗಳೇ ಇರಲ್ವಾ? ಅಂದ.. ಆವಾಗಲೆ ನನಗೆ ಅನಿಸಿದ್ದು ಇದು ಲವ್-ಪ್ರಾಬ್ಲೆಮ್ ಅಂತ್. ನಾನು ಅದಕ್ಕೆ ಪ್ರೀತಿ ಮಾಡಿದಿಯ ಅಂತ್ ಕೇಳೋದನ್ನು ಬಿಟ್ಟು, ಇವತ್ತು ಅವಳ ಮದುವೆಯಾ ಅಂತ್ ಕೇಳಿದ್ದೆ..ಅವನು ನನ್ನ ನೋಡಿ ಕಿರು ನಗೆ ಬೀಸುತ್ತಾ ಅದಕ್ಕೆ ಕಣೋ ನಾನು ನಿನ್ನ ಕರಿದು ಕೊಂಡು ಬಂದೆ ಕುಡಿಯೊಕ್ಕೆ ಅಂದ..ನಾನು ಅವನಿಗೆ ಮುಂದೆ ಹೇಳು ಅಂದಿದಕ್ಕೆ ..ಅವನು ತನ್ನ ಮೊದಲ ಪ್ರೇಮ ಕಥೆಯ ಒಂದು ಒಂದೇ ಪುಟವನು ನನ್ನ ಮುಂದೆ ತೆಗೆಯೊತ್ತ ಹೋದ.

ಅವನು B.SC ಓದ್ತಾ ಇದ್ದ ಮಾತು..ಅವಳದು C.B.Z ಕಾಂಬಿನೇಷಿಯನ್ ಆದ್ರೆ ಅವನು ಕಂಪುಟೆರ್ ಸೈನ್ಸ್ ,ಇಬ್ಬರು ಉತ್ತರ ದಕ್ಷಿಣ . ಆದ್ರೆ ಇಬ್ಬರಿಗೂ ಕನ್ನಡ ಕ್ಲಾಸ್ಸ ಕಾಮಾನ್ .ಅಂದು ಅವನು ಕನ್ನಡ ಕ್ಲಾಸಿಗೆ ಹೋಗಿ ಯಥಾ ಪ್ರಕಾರ ಹಿಂದಿನ ಬೆಂಚಲ್ಳಿ ಕುಳಿತು ತನ್ನ ಕಿಟಲೇ ಶುರು ಹಚ್ಚಬಿಟ್ಟಿದ್ದ ...ಇನ್ನೂ ಕ್ಲಾಸ್ಸ ಆರಂಭ ವಾಗಲು 5 ನಿಮಿಶ್, ಅವಳು ತನ್ನ ಇಬ್ಬರ ಗೆಳತಿಯರ ಜೊತೆ ಕ್ಲಾಸಿನಲ್ಲಿ ತನ್ನ ಮೃದವದ ಹೆಜ್ಜೆಯನ್ನು ಹಾಕುತ್ತಾ ಅವನ ಪಕ್ಕದ ಬೆಂಚಿನ ಮೇಲೆ ಬಂದು ಕುಳಿತಳು..

ಅವನಿಗೆ ಅಂದು ಕ್ಲಾಸಿನಲ್ಲೇ ಗಮನವೇ ಇಲ್ಲ..ಅವಳ ಆ ಸೌಂದರ್ಯವನ್ನೇ ನೋಡುತ್ತಾ ಅವಳ ಮಲ್ಲಿಗೆಯಂತ್ ದೊಡ್ಡ ದೊಡ್ಡ ಕಣ್ನಗಳು ,ಹಣೆಯ ಮೇಲಿನ ಉದ್ದನೆಯ ಬಿಂದಿಗೆ,ಆ ಗುಲಾಬಿ ತುಟಿ,ಅವಳು ಹಾಕಿಕೊಂಡಿರುವಾ ಆ ಕನ್ನಡಕ ಹೀಗೆ ಒಂದನ್ನು ಬಿಡಲಾರದೇ ತನ್ನ ಪುಸ್ತಕದ ಪುಟದ ಮೇಲೆ ಕ್ಯಾಪ್ಚೂರ್ ಮಾಡುತ್ತಾ ಕನಸಿನ ಲೋಕದಲ್ಲಿ ಮುಳುಗಿ ಹೋದ .ಅಂದು ಅವನು ತನಗೆ ಗೊತ್ತಿಲ್ಲದ ಹಾಗೆ ತನ್ನ ಜೀವನದ್ ಮೊದಲ ಪ್ರೇಮದಲ್ಲಿ ಕಾಲಿಟ್ಟದ್ದ. ಪಕ್ಕದಲ್ಲೇ ಇದ್ದ ಅವನ ಗೆಳೆಯನಗೆ ಏನೂ ಅವಳ ಹೆಸರು ಅಂತ್ ಕೇಳಿದ್ದಕ್ಕೆ ,ಅವನ ಗೆಳೆಯ ಅವಳ ಹೆಸರು ಗೌರಿ ತುಂಬಾ ಸ್ಟ್ರಿಕ್ಟ್ ಕಣೋ ಅವಳು ಅಂದ.

ಅವನು ಮೊದಲ ಎರಡು ವರುಷ ಅವಳನ್ನು ಹಿಂಬಾಲಿಸಿದ್ದು,ಅವಳ ಮನೆಯನ್ನು ಚಕ್ಕರ್ ಹೊಡೆದಿದ್ದು ಮತ್ತು ಕಾಲೇಜನಲ್ಲಿ ಅವಳನ್ನು ಅವನ ಹೆಸರಿಂದ ಹುಡುಗರು ಕಾಡಿಸ್ತ ಇದ್ದಿದು ಎಲ್ಲವನ್ನು ಒಂದೊಂದಾಗೇ ಹೇಳುತ್ತಾ ಹೋದ .. ದಿನ ಸಂಜೆ 6 ಮುಕ್ಕಾಲು ಗಂಟೆಗ ಅವಳ ಮನೆ ಎದುರಾಗಡೇ ಇಂದ ತನ್ನ ಲುನಾ ಸೂಪರ್ ಮೇಲೆ ಕುಲೆತು ಅವಳನ್ನು ನೋಡಲು ಅವಳ ಮನೆಗೆ ಚಕ್ಕರ್ ಹಾಕುತ್ತಿದ್ದ .ಅವಳನ್ನು ಒಂದು ದಿನ ನೋಡದೇ ಇದ್ದರೆ ಅಂದು ಅವನಿಗೆ ನಿದ್ದೇನೆ ಇಲ್ಲಾ, ಅವಳು ಇಲ್ಲಾ ಅಂದರೆ ಅವಳ ಹಾಕಿ ಕೊಳ್ಲುತ್ತಾ ಇದ್ದಾ ದುಪ್ಪಟ್ಟ ನೋಡಿದರು ಅವನಿಗೆ ಮನಸ್ಸಿಗೆ ಆನಂದವೋ ಆನಂದ ಮತ್ತು ರಾತ್ರಿ ಸಮಾಧಾನದ ನಿದ್ದೆ..

ಅಂದು ಅವನು B.Sc ಎರಡನೆ ವರ್ಷದಲ್ಲಿ ಕಾಲೇಜೆಗೆ ಮೊದಲನೆಯವನಾಗಿ ಪಾಸಾಗಿದ್ದ..ಅಂದು ಹೇಗಾದ್ರೋ ಗುಂಡಿಗೆಯನ್ನು ಗಟ್ಟಿ ಮಾಡಿ ಅವಳನ್ನು ಮಾತಾಡಿಸಬೇಕು ,ಅವಳ ರಿಸುಲ್ಟ ಕೇಳಬೇಕು ಅಂತ್ ತನ್ನ ಲುನಾ ಸೂಪರ್ ಮೇಲೆ ಕುಳಿತು ಅವಳನ್ನು ಹಿಂಬಾಲಿಸಿದ. ಇನ್ನೇನು ಅವಳ ಸನಿಹಕ್ಕೆ ಹೋಗಿ ತನ್ನ ಲುನಾ ನಿಲ್ಳಿಸ್‌ಬೇಕು ಅನ್ನುವ ವಿಚಾರದಲ್ಲಿದ್ದ.ಅವಳು ಮತ್ತು ಅವಳ ಇಬ್ಬರು ಗೆಳತಿಯರು ತಟ್ಟನೆ ಹಿಂತಿರುಗಿ ಅವನನ್ನು ನಿಲ್ಲು ಅಂದರು. ಅವನಿಗೆ ಮೈ ಎಲ್ಲಾ ಬೆವರು, ಏನು ಮಾಡಬೇಕು ಅಂತ್ ಅಲ್ಲೇ ತನ್ನ ಲುನಾ ನಿಲ್ಲಿಸಿ ಏನ್ರೀ ಅಂತ್ ಕೇಳಿದ.ಅವಳ ಗೆಳತಿ ಸೂಜಾತ ಅವನನ್ನು ನಿಮ್ಮ ಮಾರ್ಕ್ ಶೀಟ್ ಕೊಡಿ ನೋಡೋಣ ಅಂದಳು.

ಸೂಜತಾ ಬಹಳ ನೇರವಾದ್ ಹುಡುಗಿ,ಯಾವಾದನ್ನು ಹೇಗೆ ಅನಿಸುತ್ತೆ ಹಾಗೆ ಹೇಳಿ ಬಿಡುವ ಕ್ಯಾರಕ್ಟೆರ್ ಅವಳದ್ದು.ಅವನು ತನ್ನ ಮಾರ್ಕ್ ಶೀಟ್ ಕೊಡುತ್ತಾ ಗೌರಿಯ ಕಡೆ ಕಿರುಗಣ್ನಿಂದ ನೋಡಿದಾಗ,ಅವಳು ಅವನನ್ನೇ ನೋಡುತ್ತಾ ಇದ್ದಾದು ಕಂಡಿತು. ಅವಳ ಕಣ್ಣುಗಳೇ ಹಾಗೆ,ಎಂಥ ಹುಡುಗನು ಅವಳ ಕಣ್ಣಿಗೆ ಮರಳಾಗುತ್ತಿದ್ದ.ಸೂಜಾತ ಅವನ ಮಾರ್ಕ್ ಶೀಟ್ ನೋಡಿ ಆಶ್ಚರ್ಯ ಆಗಿದ್ದಳು,ಯಾವಾದನ್ನು ಅವಳು ತನ್ನು ಕನಸಿನಲ್ಲೂ ಉಹಿಸಿ ಇರಲಿಲ್ಲ ಅದು ಅವಳು ತನ್ನ ಬರಿ ಕಣ್ಣಿಂದ ನೋಡುತ್ತಾ ಇದ್ದಳು. ಪರ್ವಗಿಲ್ಲಾರಿ ನಾವು ನಿಮ್ಮನು ಬರಿ ಹುಡುಗಿಯರನ್ನು ಫಾಲೋವ್ ಮಾಡುವ ಹುಡುಗ ಅಂತ್ ತಿಳದೆದ್ದೆ ಆದ್ರೆ ನೀವು ಕಾಲಜೆಗೆ ಫ್‌ಸ್ಟು ಅಂದಿದಕ್ಕೆ ,ಅವನು ಹುಡುಗಿಯರಿಂದ ಅಲ್ಲಾರಿ ಹುಡುಗಿ ಇಂದ ಅನ್ನಿ ಅಂದ.. ಅವನ ಆ ಮಾತಿಗೆ ಗೌರಿಯ ಇಬ್ಬರು ಗೆಳತಿಯರು ಅವಳ ಕಡೆ ನೋಡಿ ಕಿರು ನಗೆ ಬೀಸಿದರು. ಅವನ ಆ ಮಾತು ಕೇಳುತ್ತಲೇ ಗೌರಿ ಸೂಜಾತ ಹತ್ತಿರ ಇರುವ ಅವನ ಮಾರ್ಕ್ ಶೀಟ್ ನೋಡುತ್ತಾ ಅವನ ಕಡೆ ಕಿರು ನಗೆ ಬೀಸಿದಳು. ಅವಳ ನಗೆ ನೋಡುತ್ತಾ ಅವನು ತನ್ನ ಮನಸ್ಸಿನಲ್ಲೇ "ಲಡ್ಕಿ ಹಸಿ ಸಮಾಜೊ ಫಸಿ ಅಂತ್" ಅಂದೊಕೊಂಡು ತನ್ನ ಲುನಾ ಸ್ಟಾರ್ಟ್ ಮಾಡಿ ಮನೆ ಕಡೆ ಹೋರಾಟ.

ಮೂರನೆಯ ವರುಷದಲ್ಲಿ ಅವರಿಬ್ಬರ್ ನಡುವೆ ಪ್ರೇಮ ಸಿಂಚ್‌ನ್ ಬೀರುಕ್ ಹಾಕಿತ್ತು, ಆದ್ರೆ ಒಬ್ಬರಿಗೆ ಒಬ್ಬರು ಪ್ರೋಪೋಸೆ ಮಾಡ್ಲೆ ಇಲ್ಲ. ಎಲ್ಲಿ ಈ ಪ್ರೇಮದಿಂದ ತಮ್ಮ ಗೆಳೆತನ ಮುರಿದು ಬೀಳುತ್ತೆ ಅಂತ್ ಮನಸ್ಸಿನಲ್ಲಿ ಹೆದರಿಕೆ. ಅವನ ಹತ್ತಿರದ ಗೆಳತಿ ಪ್ರಿಯಾಗೇ ದಿನ ಗೌರಿಯ ಬಗ್ಗೆ ಕೇಳಿ ಕೇಳಿ ಸಾಕಾಗಿ ಅವಳೇ ಒಂದು ದಿನ ಗೌರಿಯ ಹತ್ತಿರ ಹೋಗಿ ಹೇಳಿ ಬಿಟ್ಟಳು.ಗೌರಿ ನಗುತ್ತಾ ನಾನು ಅವರನ್ನ ಲೈಕ್ ಮಾಡ್ತೀನಿ ಅಂದಿದ್ದಳು.ಮುಂದೆ ಅವರಿಗೆ ಒಬ್ಬರಿಗೆ ಒಬ್ಬರು ಪ್ರಪೋಸೆ ಮಾಡುವ ಪ್ರಮಾಯನೇ ಬರಲಿಲ್ಲ. ಮೂರನೆಯ ವರ್ಷದ ಕೊನೆಯಕ್ಕೆ ಇಬ್ಬರ ನಡುವಿನ ಬೀರುಕ್ ಬಿಟ್ಟಿದ ಆ ಪ್ರೇಮ ಸಿಂಚ್‌ನ್ ಘಾಡವಾದ ಪ್ರೇಮವಾಗಿ ಬೆಳೆದಿತ್ತು.

ಇಬ್ಬರಿಗೂ ಮೂರನೇ ವರ್ಷ ಬೇಗನೆ ಮುಗಿದಾ ಹಾಗಿತ್ತು. ಕಾಲೇಜ್ ದಿನಗಳು ಮುಗಿದು ಅವನು ಹೆಚ್ಚಿನ ವಿದ್ಯಾಬ್ಬ್ಯಾಸಕ್ಕೆ ಬೆಂಗಳೋರಿಗೆ ಹೋದ.ಮೋದ ಮೊದಲು ಅವಳಿಂದ ಪತ್ರ ಬರುತ್ತಿದ್ದವು ಆದರೆ ಆಮ್ಯಾಲೆ ಪತ್ರ ಬಿಡಿ ಅವನು ಅವಳ ಮನೆಗೆ ಫೋನ್ ಮಾಡಿದರೆ ಅದಕ್ಕೆ ಉತ್ತರವು ಇಲ್ಲಾ. ಒಂದು ತಿಂಗಳು ಆದ ಮೇಲೆ ಅವನು ಏನಾಗಿದೆ ಅಂತ್ ತನ್ನ ಉರಿಗೆ ಹೋಗಿ ಸೂಜಾತಾಗೇ ಭೇಟಿ ಆದಾಗ ಗೊತ್ತಾಗಿದ್ದು, ಗೌರಿಯ ಎಂಗೇಜೆಮೆಂಟ್ ಆಗಿ ಮದುವೆ ಡೆಟ್ ಕೂಡ ಫೀಕ್ಸ್ ಆಗಿದೆ ಅಂತ್. ಅವನು ಅವಳಿಗೆ ಭೇಟಿ ಮಾಡಬೇಕು ಅನ್ನುವ ಎಲ್ಲಾ ಪ್ರಯತ್ನಗಳು ವ್ಯರ್ಥ,ಅವನ್ ಆ ಪ್ರಯತ್ನಗಳಿಗೆ ಕೊನೆಗೆ ಅವನ್ ಕೈಗೆ ಸಿಕ್ಕಿದ್ದು ಎರಡು ಸಾಲಿನ ಪತ್ರ. ಅದರಲ್ಲಿ ಬರೆದಿತ್ತು "ನಾನು ನಿನ್ನ ಮರೆತು ಬಿಟ್ಟೆದ್ದೇನೆ , ನೀನು ನನ್ನ ಮರೆತು ಬಿಡು" . ಆ ಎರಡು ಸಾಲಿನ ಪತ್ರ ಅವನು ಸಾವಿರ ಸಲ ಓದಿ ಹಾಕಿದ್ದ. ಅವನಿಗೆ ಒಂದೇ ಅಸಮಾಧನ್,ಸಾವಿರ ಸಲ ಓದಿದ ಪತ್ರದಲ್ಲಿ ಎಲ್ಲಿಯು ಭಾವನೆಗಳೇ ಕಾಣಿಸಲಿಲ್ಲ. ಇದನ್ನು ಹೇಳುತ್ತಾ ಅವನ ಕಣ್ಣಿನಿಂದ ದೊಡ್ಡ ಹನಿಗಳು ಬೀಳಲು ಆರಂಭವಾದವು ...

ನಾನು ಏನನ್ನು ಮಾತಡದೇ ಅವನನ್ನೇ ನೋಡುತ್ತಾ ಇದ್ದೇ ಆದರೆ ಇದೆಲ್ಲ ಕೇಳುತ್ತಾ ಇದ್ದ ನನಗೆ ಮನಸ್ಸಿನಲ್ಲಿ ನೂರಾರು ಪ್ರ ಸ್ನೆಗಳು . ಪ್ರೀತಿ ಈಸ್ಟೋಂದು ವಿಚಿತ್ರನಾ? ಹುಡುಗಿಯ ದುಪ್ಪಟ ನೋಡಿ ಅವಳನ್ನೇ ನೋಡಿದಾಸ್ಟ್ ಆನಂದ ಆಗುತ್ತದೆಯಾ? ಎರಡು ಸಾಲಿನ ಪತ್ರ ಸಾವಿರ ಬಾರಿ ಓದಲು ಸಾಧ್ಯನ? ಈ ಮನಸ್ಸಿನ ಭಾವನೆಗಳಿಗೆ ಕಡಿವಾಣ ಹಾಕುವಾದು ಆಸ್ಟೋಂದು ಕಸ್ಟ್‌ನಾ ?. ನನ್ನ ಪ್ರ ಸ್ನೆಗಳಿಗೆ ಉತ್ತರ್ ಸಿಗಬೇಕಾದರೆ ನನಗೂ ಪ್ರೀತಿ ಆಗಬೇಕು ಅಂತ್ ಮನಸ್ಸಿನಲ್ಲಿ ಅನ್ನಿ ಕೊಳ್ಲುತ್ತಾ ಒಂದು ಸಿಗರಟೆ ಹಚ್ಚಿದೆ .

10 comments:

CS said...

ಭಾವನೆಗಳಿಗೆ ಕಡಿವಾಣ ಹಾಕೋದು ಮನುಷ್ಯನಿಗೆ ಕಾಸ್ಟ್ ಏನಿಲ್ಲ ಸಾರ್...ಆದ್ರೆ ಭಾವಣೆಃಗಳ ಕಡಿವಾಣದಿಂದ ಮುಕ್ತಿ ಸಿಗೋದು ಬಹಳ ಕಾಸ್ಟ್. ಎಲ್ಲೀವರೆಗೆ ಮನುಷ್ಯನ ಭಾವನೆಗಳಿಗೆ ಸ್ಪಂದನೆ ಈರತ್ತೋ ಅಲ್ಲೀವರೆಗೆ ಅವನು ಅದನ್ನ ತನ್ನ ಮಾನಸಿನಲ್ಲಿ ತುಂಬ್ಕೊತ ಹೋಗ್ತಾನೆ.... ಅಲ್ಲಿ ವರೆಗೆ ಬಿದ್ದ ಕಡಿವಾಣ ಬಹಳ ಧೃಡವಾದದು....ಅದಕ್ಕೆ ಪರಿಹಾರ ಕೇವಲ ಸಮಯದ ಜೊತೆ ಕೈಗೂಡಿಸೋದು..."only time can heal" !!!! :))

Bigbuj said...

Charan
ಸತ್ಯವಾಗಿ ಹೇಳಿದಿರಿ , ಆದ್ರೆ ಆ ಪರಿಹಾರ್ ಸಿಗುವ ಸಮಯದವರೆಗೆ ಮನುಷ್ಯ ದಿನಲೂ ಕೋರೋಗುತ್ತಾನೆ ಅಲ್ವೇ? ಆದ್ರೆ ಒಂದು ಮಾತ್ರ ನಿಜ ಸಮಯ ಎಲ್ಲವನ್ನು ಮರೆಸುತ್ತೆ.

Abhi said...
This comment has been removed by the author.
Abhi said...

I know whose story it is !!
Who is the other person sitting with you ??... I guess there were two people giving company to Deepak :-)

Unknown said...

Sharan its a nice story. My wishes to the person who loved a girl so much, its her fate that she could not get his love.
I Agree with the person who loved so much but he did not propose thats a mistake. More over in what sense or in what way she should wait for the person who has not yet all proposed.

Yes its true love from deepak...hats off to you deepak but some where some one god has created a love who will give you love from bottom of her heart.

Anonymous said...

preeti sikkito ilvo annokkinta... avalanna aahuduga preetisovaregu pramaanikavaagi tumba preetistidnalla ashtu saaku..

Unknown said...

Hi Sir ji ,

Really its gud, Jus like "Autograph" movie . Nice story, Kisi ka pyar paana zindgi mein bahut badi cheEz hoti hai , lekin yahan galti kisi ki bhi nahin hai . Sab waqt ka kiya dhara hai .. Keep writing..

Bigbuj said...

@Abhinay..
Lo..dont see who is that guy..See into that characters and feelings..BTB thanks for ur comments.

@NVJ
Thank u sir..Hope deepak can see those wishes from u....

@Siri..
Hmm preeti iruvade hage kane..Thanks for ur comments

@Shaziya..
Thank you ..Thats true..Time plays very important role in life..I am really provoked by ur comments..

Unknown said...

Hello Bujurg....ninna lekhana supparruu.... Edanna vodid mele, nanag ansiddu enapa andre - why don't u do a part time job in some novel/story writing branch???.... the article was just supper.. I think such novel/story field is missing guys like u..U have a good control over kannada which many kannadiga's don't, including me...:-(( ... keep it up... will be eagerly waiting for ur next writing....njoy madi...take care madi..:-)

Bigbuj said...

@Veeresh..

ನಾನು ಒಂದು ಬಹಲ್ ಚಿಕ್ಕ ಮೀನು ಈ ಸಾಗರದಲ್ಲಿ..ಆದರೂ ನಿನ್ನ ಪ್ರೋತ್ಸಾಹಕ್ಕೆ ಧನ್ಯವಾದಗಳು ....Checkout the new article..