ಹತ್ತನೆ ತರಗತಿಯಲ್ಲಿ ನಡೆದ ಆ ಘಟನೆ ನಾನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅಂದು ಭಾನುವರ್ ನಮಗೆ ಶಾಲೆ ಆರ್ಧ ದಿನ, ಆದ್ದರಿಂದ ನಮ್ಮ ಶಾಲೆಯಲ್ಲಿ ಎಲ್ಲರಿಗೂ ಫಿಲ್ಮ್ ತೋರಿಸುವ ಒಂದು ಪ್ರೋಗ್ರಾಮ್ ಹಮ್ಮಿ ಕೊಂಡಿದ್ದರು. ಆವಾಗಲೆ ನಮ್ಮ ಕ್ಲಾಸಿನ ಎಲ್ಲ ಹುಡುಗರು ಶಾಲೆಯ ಆ ದೊಡ್ಡ ಕೋಣೆಯಲ್ಲಿ ಕೂಡಿ ಕೊಂಡಿದ್ದರು.ನಾನು ,ಸುನಿಲ್ ಮತ್ತು ಮಹೇಶ್ ಒಂದೇ ಕಡೆ ಕುಳಿತೆವು.
ಅದು ಕನ್ನಡ ಚಿತ್ರ, ನನಗೆ ನಾಯಕ್ ಮತ್ತು ನಾಯಕಿಯ ಹೆಸರು ಆಸ್ಟೋಂದು ನೆನಪಿಗೆ ಬರ್ತಾ ಇಲ್ಲ. ಆ ಚಿತ್ರದಲ್ಲಿ ಬರುವ ಒಂದು ಸನ್ನಿವೇಶ ನನ್ನ ಜೀವನದ ಮರೆಯಲಾರದ ಘಟನೆ ಆಗುಂತೆ ಅಂತ್ ಚಿತ್ರ ಆರಂಭವಾದಾಗ ನಾನು ಅನ್ನಿ ಕೊಂಡೇರ್ಲಿಲ್ಲಾ .ಚಿತ್ರವೇನೋ ಆರಂಭವಾಯಿತು ,ಕೋಣೆಯಲ್ಲಿ ಎಲ್ಲಾ ಹುಡುಗರು ಪಿಟಕ್ ಅನ್ನದೇ ಚಿತ್ರ ನೋಡುತ್ತಿದರು. ಆ ಚಿತ್ರದಲ್ಲಿ ನಾಯಕಿ ಮದುವೆಗೆ ಮುಂಚೆ ಗರ್ಬವತಿ ಆಗುವ ಒಂದು ಸನ್ನಿವೇಶ ನೋಡಿ ಮಹೇಶ್ ಏನೇನೋ ಗೊಣಗಲು ಶುರು ಮಾಡಿದ್ದ. ಅವನು ಚಿತ್ರ ಮುಗಿಯುವರಿಗೂ ತನ್ನ ಗೋಣುಗುತನ ನಿಲ್ಲಿಸಿರ್ಲಿಲ್ಲ.
ನನಗೆ ಮತ್ತು ಸುನೀಲ್‌ಗೆ ಸಿಟ್ಟು ತಡಿಯೊಕ್ಕೆ ಆಗ್ಲಿಲ್ಲ . ಚಿತ್ರ ಮುಗಿದು ಕೊಣೆಯ ಹೊರಗಡೆ ಬಂದಿದ್ದೆ ತಡ ಇಬ್ಬರು ಒಂದೇ ಹೊತ್ತಿಗೆ ಎನಲೇ ನಿನ್ನ ಕಸ್ಟ್ ಅಂತ್ ಕೇಳಿದ್ದೆವು. ಅದಕ್ಕೆ ಅವನು ಬಂಡಲ್ ಚಿತ್ರ ಅಂದ. ನಾನು ಯಾಕೆ ಏನು ಬಂಡಲ್ ಇತ್ತು ಅಂತ್ ಕೇಳಿದಕ್ಕೆ, ಅವನು ನಮ್ಮನ್ನು ಒಮ್ಮೆ ನೋಡಿ ತಾಳಿ ಕಟ್ಟಲಾರದೇ ನಾಯಕಿ ಗರ್ಭವತಿ ಹೇಗೆ ಆಗ್ತಾಳಲೇ ಅಂತ್ ಕೇಳಿದ್ದ. ಅವನ ಆ ಮುಗ್ದ ಪ್ರಸ್ನೆ ಕೇಳಿ ನಾವಿಸ್ಟೇ ಅಲ್ಲಾ ನಮ್ಮ ಸುತ್ತಮುತ್ತಲಿನ ಹುಡುಗರು ಕೂಡ ಹೊಟ್ಟೆ ಹುಣ್ಣು ಬೀಳುವ ಹಾಗೆ ನಕ್ಕಿದ್ದೆವು.
Subscribe to:
Post Comments (Atom)
1 comment:
ha ha...Sharanu..
This is very funny.
-sam-
Post a Comment